ಧ್ಯಾನ
ಕಂಡೆ ನಾ ಧ್ಯಾನ ದಲಿ
ಅಮೂರ್ತ ಸ್ವರೂಪ
ಅನಂತ ನಿರ್ವಿಕಾರ
ನಿರ್ಮಲ ಪ್ರದೀಪ !!
ಸತ್ಯಾ ಸತ್ಯತೆಯ
ತಿಳಿ ಪರದೆ ಸರಿಸಿ
ಒಳಗೆ ನೋಡಿದೆ ನಾನು
ಕಣ್ಣ ನಿರಿಸಿ !!
ಅಂತಃ ಸತ್ವದ ಪ್ರಬಲ
ಜಲಚಿಮ್ಮಿದಾಗ
ಅಗೋಚರ ಗಾತ್ರವದು
ಮೈದಡವಿದಾಗ !!
ಮನಪುಳಕಗೊಂದು
ಸರ್ವೆಂದ್ರಿಯಗಳೂ
ಬಲವಂತ ಸೆಳೆತಗೊಂಡು !!
ಕುಳಿತಲ್ಲೇ ಎದ್ದೆ
ಸಾಷ್ಟಾಂಗ ಬಿದ್ದೆ !!
ಏಕೆಂದು ಗೊತ್ತಿಲ್ಲ
ಸ್ತಭ್ದ ವಾಯಿತು ಎಲ್ಲ
ಆಚೀಚೆ ನೋಡಿದರೆ
ಇಲ್ಲ ಶಬ್ದ !!
ಕಂಡೆ ನಾ ಧ್ಯಾನ ದಲಿ
ಅಮೂರ್ತ ಸ್ವರೂಪ
ಅನಂತ ನಿರ್ವಿಕಾರ
ನಿರ್ಮಲ ಪ್ರದೀಪ !!
ಸತ್ಯಾ ಸತ್ಯತೆಯ
ತಿಳಿ ಪರದೆ ಸರಿಸಿ
ಒಳಗೆ ನೋಡಿದೆ ನಾನು
ಕಣ್ಣ ನಿರಿಸಿ !!
ಅಂತಃ ಸತ್ವದ ಪ್ರಬಲ ಜಲಚಿಮ್ಮಿದಾಗ
ಅಗೋಚರ ಗಾತ್ರವದು
ಮೈದಡವಿದಾಗ !!
ಮನಪುಳಕಗೊಂದು
ಸರ್ವೆಂದ್ರಿಯಗಳೂ
ಬಲವಂತ ಸೆಳೆತಗೊಂಡು !!
ಕುಳಿತಲ್ಲೇ ಎದ್ದೆ
ಸಾಷ್ಟಾಂಗ ಬಿದ್ದೆ !!
ಏಕೆಂದು ಗೊತ್ತಿಲ್ಲ
ಸ್ತಭ್ದ ವಾಯಿತು ಎಲ್ಲ
ಆಚೀಚೆ ನೋಡಿದರೆ
ಇಲ್ಲ ಶಬ್ದ !!
